ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

     ಕರ್ನಾಟಕ ರಾಜ್ಯದಲ್ಲಿ ತೋಟಗಾರಿಕೆಯು ಒಂದು ಪ್ರಮುಖರಂಗವಾಗಿದೆ. ಈ ಕೆಳಕಾಣಿಸಿದ ತುಲನಾತ್ಮಕ ಮೇಲುಗೈ ಅಂಶಗಳಿಂದಾಗಿ ತೋಟಗಾರಿಕೆ ಬೆಳೆಗಳು ರೈತರಿಗೆ ಹೆಚ್ಚು ಆಕರ್ಷಣೀಯವಾಗಿದೆ ಹಾಗೂ ತೋಟಗಾರಿಕೆ ಬೆಳೆಗಳು ಹೆಚ್ಚು ಲಾಭವನ್ನು ನೀಡುತ್ತವೆ.

 • ರಾಜ್ಯದಲ್ಲಿ ಕಾಣಬರುವ ವೈವಿಧ್ಯಮಯ ಭೂ ಹವಾಗುಣ ಪರಿಸ್ಥಿತಿಗಳು ವಿವಿಧ ತೋಟಗಾರಿಕೆ ಬೆಳೆಗಳನ್ನು ವರ್ಷವಿಡಿ ಯಶಸ್ವಿಯಾಗಿ ಬೆಳೆಯಲು ಸಹಕಾರಿಯಾಗಿರುತ್ತದೆ.
 • ಅನೇಕ ಬಹುವಾರ್ಷಿಕ ತೋಟಗಾರಿಕೆ ಬೆಳೆಗಳು ತೀವ್ರ ಬರ ಪರಿಸ್ಥಿತಿಯನ್ನು ನಿಗ್ರಹಿಸಿ ಸಾಕಷ್ಟು ಸಮಾಧಾನಕರವಾದ ಇಳುವರಿಯನ್ನು ನೀಡುವ ಗುಣ ಹೊಂದಿರುತ್ತವೆ. ಕಡಿಮೆ ಮಳೆ ಬೀಳುವ ಮತ್ತು ಬರಪೀಡಿತ ಪ್ರದೇಶಗಳಲ್ಲಿ ಈ ಬೆಳೆಗಳನ್ನು ಬೆಳೆಸಲು ಸೂಕ್ತವಾಗಿವೆ.
 • ತೋಟಗಾರಿಕೆ ಪದಾರ್ಥಗಳನ್ನು ಮೌಲ್ಯವರ್ಧಿತ ವಸ್ತುಗಳನ್ನಾಗಿಸಿ ಪರಿವರ್ತನೆ ಗೊಳಿಸಬಹುದು.
 • ನೇರವಾಗಿ ಅವಲಂಬಿಸಿದ ರೈತರಿಗೆ ಹಾಗೂ ಪರೋಕ್ಷವಾಗಿ ಅವಲಂಬಿತರಾಗಿರುವ ಇನ್ನು ಅನೇಕರಿಗೆ ಹಲವಾರು ರೀತಿಯ ಪ್ರಯೋಜನವನ್ನು ಪಡೆಯುವ ಅವಕಾಶವನ್ನು ಕಲ್ಪಿಸುತ್ತದೆ.
 • ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಿರುವ ಉನ್ನತ ತಂತ್ರಜ್ಞಾನದ ತೋಟಗಾರಿಕೆಯಿಂದಾಗಿ ಉತ್ತಮ ಗುಣಮಟ್ಟದ ಪದಾರ್ಥಗಳನ್ನು ವಿದೇಶಗಳಿಗೆ ರಫ್ತು ಮಾಡುವ ಅವಕಾಶಗಳು ಹೆಚ್ಚುತ್ತಲಿವೆ.
 • ತೋಟಗಾರಿಕೆ ಪದಾರ್ಥಗಳಾದ ಹಣ್ಣು ಮತ್ತು ತರಕಾರಿಗಳು ರಕ್ಷಿತ ಆಹಾರ ಪದಾರ್ಥಗಳೆಂದು ಪರಿಗಣಿಸಲ್ಪಟ್ಟಿರುವ ಕಾರಣ ಹಾಗೂ ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರು ಆರೋಗ್ಯ ರಕ್ಷಣೆಯ ಕಡೆಗೆ ಹೆಚ್ಚಿನ ಗಮನ ನೀಡುತ್ತಿರುವ ಕಾರಣ ತೋಟಗಾರಿಕೆ ಪದಾರ್ಥಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗಿದ್ದು, ಇದು ಅವುಗಳ ಉತ್ಪಾದನಾ ಪ್ರಕ್ರಿಯೆಗೆ ಹೆಚ್ಚು ಉತ್ತೇಜನಕಾರಿಯಾಗಿದೆ.
 • ತೋಟಗಾರಿಕೆಯು ಮಾನವನ ಸೌಂದರ್ಯವರ್ಧಕ ಬೇಡಿಕೆಗಳನ್ನು ಪೂರೈಸುವಲ್ಲಿಯೂ ಸಹ ಹಿಂದೆಬಿದ್ದಿಲ್ಲ. ಪುಷ್ಪಗಳು ಹಾಗೂ ಅವುಗಳ ಪದಾರ್ಥಗಳು ಈ ದಿಸೆಯಲ್ಲಿ ಜನಸಾಮಾನ್ಯರಿಗೆ ಹೆಚ್ಚು ಅಗತ್ಯವಾಗಿ ಕಂಡುಬರುತ್ತಿರುವ ಕಾರಣ ಸಾಂಪ್ರದಾಯಿಕ ಪುಷ್ಪ ಗಾರಿಕೆ ಮತ್ತು ಉನ್ನತ ತಂತ್ರಜ್ಞಾನದ ಪುಷ್ಪ ಗಾರಿಕೆಗೆ ಹೆಚ್ಚಿನ ಒಲವು ಕಂಡುಬಂದಿರುತ್ತದೆ.

ಇವೆಲ್ಲಾ ಅವಶ್ಯಕತೆಗಳು ಹಾಗೂ ಬೆಳವಣಿಗೆಗಳ ದೆಸೆಯಿಂದಾಗಿ ರಾಜ್ಯದಲ್ಲಿ ತೋಟಗಾರಿಕೆ ಯು ಒಂದು ಆಶಾದಾಯಕವಾದ ನವಶಕ್ತಿಗೆ ನಾಂದಿ ಹಾಡಿದ್ದು, ರೈತ ಸಮುದಾಯದ ಅಭಿವೃದ್ಧಿ ಹಾಗೂ ಉತ್ತಮವಾದ ಭವಿಷ್ಯಕ್ಕೆ ಹೊಸ ಆಯಾಮ ಒದಗಿಸಿರುತ್ತದೆ.

ಇತ್ತೀಚಿನ ನವೀಕರಣ​ : 11-08-2021 12:44 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ತೋಟಗಾರಿಕೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080