ಅಭಿಪ್ರಾಯ / ಸಲಹೆಗಳು

ಸಾಂಸ್ಥಿಕ ರಚನೆ

ಸಾಂಸ್ಥಿಕ ರಚನೆ

  •     ತೋಟಗಾರಿಕೆ ನಿರ್ದೇಶಕರ ನೇತೃತ್ವದಲ್ಲಿ ನಿರ್ದೇಶನಾಲಯದ ಒಟ್ಟಾರೆ ಆಡಳಿತಾತ್ಮಕ ನಿರ್ವಹಣೆಗೊಳಪಟ್ಟಿದ್ದು, ತೋಟಗಾರಿಕೆ ನಿರ್ದೇಶಕರ ನೆರವಿಗೆ 4 ತೋಟಗಾರಿಕೆ ಅಪರ ನಿರ್ದೇಶಕರು, 9 ತೋಟಗಾರಿಕೆ ಜಂಟಿ ನಿರ್ದೇಶಕರು ಕೇಂದ್ರ ಸ್ಧಾನದಲ್ಲಿ, 4 ವಿಭಾಗೀಯ ಮಟ್ಟದಲ್ಲಿ ತೋಟಗಾರಿಕೆ ಜಂಟಿ ನಿರ್ದೇಶಕರು ಮತ್ತು 4 ತೋಟಗಾರಿಕೆ ಜಂಟಿ ನಿರ್ದೇಶಕರು ಇತರೆ ಸಂಸ್ಥೆ/ ಮಂಡಳಿಗಳಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಜಿಲ್ಲಾ ಮಟ್ಟದಲ್ಲಿ, ತೋಟಗಾರಿಕೆ ಉಪ ನಿರ್ದೇಶಕರು ಜಿಲ್ಲೆಯ ತೋಟಗಾರಿಕೆ ಅಬಿವೃದ್ಧಿಯ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಹಿರಿಯ ಸಹಾಯಕ  ತೋಟಗಾರಿಕೆ ನಿರ್ದೇಶಕರು (ರಾಜ್ಯವಲಯ) ಇವರು, ರಾಜ್ಯವಲಯದಡಿ ಇರುವ ತೋಟಗಾರಿಕೆ ಕ್ಷೇತ್ರಗಳ ಮತ್ತು ನರ್ಸರಿಗಳ ನಿರ್ವಹಣೆ, ವಿವಿಧ ರಾಜ್ಯವಲಯ ಮತ್ತು ಕೇಂದ್ರವಲಯ ಯೋಜನೆಗಳ ಅನುಷ್ಠಾನ ಹಾಗೂ ಸಹಾಯಕ ತೋಟಗಾರಿಕೆ ನಿರ್ದೇಶಕರ ನೇತೃತ್ವದಲ್ಲಿ ನಿರ್ವಹಿಸಲಾಗುತ್ತಿರುವ ಜಿಲ್ಲಾ ತೋಟಗಾರಿಕೆ ತರಬೇತಿ  ಕೇಂದ್ರಗಳ ಮೇಲುಸ್ತುವಾರಿಯಂತಹ ಕಾರ್ಯಗಳನ್ನು ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕರುಗಳ (ಜಿಪಂ)  ರವರಅಧೀನದಲ್ಲಿ ನಿರ್ವಹಿಸುತ್ತಿರುತ್ತಾರೆ. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಮತ್ತು ಸಹಾಯಕ ತೋಟಗಾರಿಕೆ ನಿರ್ದೇಶಕರು ತಾಲ್ಲೂಕು ಮಟ್ಟದ ತೋಟಗಾರಿಕೆ ಅಬಿವೃದ್ಧಿಯ ಜವಾಬ್ದಾರಿ ಹೊಂದಿರುತ್ತಾರೆ ಹಾಗೂ ಆಡಳಿತಾತ್ಮಕವಾಗಿ ಜಿಲ್ಲಾ ಪಂಚಾಯತ್ ವ್ಯಾಪ್ತಿಗೊಳಪಟ್ಟಿರುತ್ತಾರೆ ಹಾಗೂ 2008-09ನೇ ಸಾಲಿನಿಂದ ಇಲಾಖಾ ಕಾರ್ಯವ್ಯಾಪ್ತಿಯು ಹೋಬಳಿ ಮಟ್ಟದಲ್ಲೂ ವಿಸ್ತರಣೆ ಹೊಂದಿದ್ದು, ಪ್ರತಿ ರೈತ ಸಂಪರ್ಕ ಕೇಂದ್ರಗಳಲ್ಲಿ ಒಬ್ಬ ಸಹಾಯಕ ತೋಟಗಾರಿಕೆ ಅದಿಕಾರಿಯು ಕಾರ್ಯನಿರ್ವಹಿಸುತ್ತಿದ್ದಾರೆ.        ಇದಲ್ಲದೇ, ಆಡಳಿತಾತ್ಮಕ ವಿಷಯಗಳ ನಿರ್ವಹಣೆಯಲ್ಲಿ ನೆರವಾಗಲು ಇತರೆ ಲಿಪಿಕ ಸಿಬ್ಬಂದಿ  ವರ್ಗದವರು ಸಹ ಆಯಾ ಕಛೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.   

                       ಸಚಿವಾಲಯ ಹಂತದಲ್ಲಿ 04-04-2007 ರಿಂದ ತೋಟಗಾರಿಕೆ ಇಲಾಖೆಯು, ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಪ್ರತ್ಯೇಕಗೊಂಡು ಸ್ವತಂತ್ರ ಇಲಾಖೆಯಾಗಿ ಕಾರ್ಯನಿರ್ವಹಿಸುತ್ತಿದೆ.

     

     

ಇತ್ತೀಚಿನ ನವೀಕರಣ​ : 11-08-2021 12:44 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ತೋಟಗಾರಿಕೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080