ಅಭಿಪ್ರಾಯ / ಸಲಹೆಗಳು

ಲಾಲ್‌ ಬಾಗ್

ಲಾಲ್‌ ಬಾಗ್‌ ಸಸ್ಯಶಾಸ್ತ್ರೀಯ ತೋಟ

 

ಲಾಲ್‌ ಬಾಗ್‌ ಸಸ್ಯಶಾಸ್ತ್ರೀಯ ತೋಟ ವಿಶ್ವದ ಹಲವಾರು ರಾಷ್ಟ್ರಗಳಿಂದ ಪಡೆದುಕೊಳ್ಳಲಾದ ನೂರಾರು ಸಸ್ಯಗಳನ್ನು ಉಳಿಸಿ, ಬೆಳೆಸಿ, ಪೋಷಿಸಿಕೊಂಡು ಬಂದಿರುತ್ತದೆ. 1760 ರಿಂದಲೂ ದೇಶಿ ಮತ್ತು ವಿದೇಶಿ ಪುಷ್ಪ, ವೃಕ್ಷ, ಪೊದೆಗಳನ್ನು ಸ್ವಾಗತಿಸಿ ಬೆಳೆಸಿ ಜೈವಿಕ ವೈವಿಧ್ಯಗಳನ್ನು ಸಾಕ್ಷೀಕರಿಸಿದ ಸಸ್ಯಶಾಸ್ತ್ರೀಯ ತೋಟವೆಂಬ ಹೆಸರಿಗೆ ಅನ್ವರ್ಥವಾಗಿ ಇಲ್ಲಿ ನೂರಾರು ಸಸ್ಯಗಳನ್ನು ಜೊತೆಜೊತೆಗೇ ಪ್ರದರ್ಶಿಸಲಾಗಿದೆ.

ಹೀಗಾಗಿ ಇಂದು ಲಾಲ್‌ ಬಾಗ್‌ ನಲ್ಲಿ 673 ಪ್ರಭೇದ ಹಾಗೂ 140 ಕುಟುಂಬಕ್ಕೆ ಸೇರಿದ 2150 ವಿವಿಧ ಪ್ರಭೇದಗಳಿದ್ದು, ಪ್ರಕೃತಿಯ ಒಂದು ಅಪರೂಪದ ಬೃಹತ್‌ ಸಂಗ್ರಹಾಲಯವಾಗಿದೆ.ಭಾರತ ಮೂಲದ ನೂರಾರು ವೃಕ್ಷಗಳ ಜೊತೆಗೆ ವಿಶ್ವದ ಬೇರೆ ಬೇರೆ ರಾಷ್ಟ್ರಗಳಿಂದ ತಂದು ಬೆಳೆಸಲಾಗಿರುವ ನೂರಾರು ವೃಕ್ಷಗಳು ಲಾಲ್‌ ಬಾಗ್ ನ ಮೂಲೆ ಮೂಲೆಗಳಲ್ಲಿ ಸೊಗಸಾಗಿ ಬೆಳೆದುನಿಂತು ಪ್ರಕತಿ ಮಾತೆಯ ವಿಶ್ವಭ್ರಾತೃತ್ವ ಶಕ್ತಿಗೆ ಸಾಕ್ಷಿಯಾಗಿದೆ.

ಲಾಲ್‌ ಬಾಗಿನ ನಿರಂತರ ಸೃಷ್ಟಿ, ಕ್ರಿಯಾತ್ಮಕತೆ ಮತ್ತು ಕಾರ್ಯಶೀಲತೆಗಳಿಗೆ ಸಾಕ್ಷಿಯಾಗಿ ವರ್ಷಂಪ್ರತಿ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರೋತ್ಸವಗಳ ಸಂದರ್ಭಗಳಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನಗಳು ದಿನಗಳೆದಂತೆ ಅಪಾರ ಜನಪ್ರಿಯತೆ ಗಳಿಸಿಕೊಳ್ಳುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ರಾಜ್ಯದ ಕೀರ್ತಿಯಾಗಿರುವ ಲಾಲ್‌ ಬಾಗ್‌ ರಾಷ್ಟ್ರದ ಹೆಮ್ಮೆಯಾಗಿದೆ.

 

ಲಾಲ್‌ ಬಾಗ್‌ ಸಸ್ಯಶಾಸ್ತ್ರೀಯ ತೋಟದ ನಕ್ಷೆ

1. ಗಾಜಿನ ಮನೆ

2. ಲಾಲ್‌ ಬಾಗ್‌ ಕೆರೆ

3. ಗುಲಾಬಿ ಉದ್ಯಾನವನ

4. ಬ್ಯಾಂಡ್‌ ಸ್ಟ್ಯಾಂಡ್

5. ಹೂವಿನ ಗಡಿಯಾರ‌

6. ಜಪಾನೀಸ್‌ ಉದ್ಯಾನವನ

7. ಬೋನ್ಸಾಯ್‌ ಉದ್ಯಾನವನ

8. ತೋಟಗಾರಿಕೆ ಮಾಹಿತಿ ಕೇಂದ್ರ

 

ವೀಕ್ಷಣೆಯ ಸಮಯ ಮತ್ತು ಪ್ರವೇಶ ಶುಲ್ಕ

ಸಾರ್ವಜನಿಕರಿಗೆ : ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ - ರೂ 25/ವ್ಯಕ್ತಿಗೆ (12 ವರ್ಷ ಮೇಲ್ಪಟ್ಟವರಿಗೆ)

 

ನಡುಗೆದಾರರಿಗೆ : ಬೆಳಿಗ್ಗೆ 5 ರಿಂದ  9  ಹಾಗೂ ಸಂಜೆ 4 ರಿಂದ 7 ರವರೆಗೆ 

 

ಇಂಗ್ಲೆಂಡಿನ ಕ್ರಿಸ್ಟಲ್‌ ಪ್ಯಾಲೆಸ್‌ ಮಾದರಿಯಲ್ಲಿ ನಿರ್ಮಾಣವಾಗಿರುವ ಅಪರೂಪದ ನಿರ್ಮಾಣವಾಗಿದೆ. ಲಾಲ್‌ ಬಾಗಿನ ಸೂಪರಿಂಟೆಂಡೆಂಟ್‌ ರಾಗಿದ್ದ ಜಾನ್‌ ಕ್ಯಾಮೆರಾನ್‌ ಅವರಿಂದ 1889-90 ರ ಅವಧಿಯಲ್ಲಿ ನಿರ್ಮಿಸಲಾಗಿರುವ ಗಾಜಿನಮನೆಯಲ್ಲಿ ವರ್ಷಕ್ಕೆರಡು ಬಾರಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನಗಳು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಪ್ರಸಿದ್ಧಿಯನ್ನು ಪಡೆದಿವೆ.
   

ಕರ್ನಾಟಕ ಸರ್ಕಾರದ ತೋಟಗಾರಿಕೆ ಇಲಾಖೆಯ ಮುಕುಟಮಣಿಯಾಗಿರುವ ಲಾಲ್‌ ಬಾಗ್‌, ರಾಜಧಾನಿ ಬೆಂಗಳೂರು ನಗರದ ಹಸಿರುಸೆಲೆಯಾಗಿದ್ದು, ನಿತ್ಯಹರಿದ್ವರ್ಣದ ನೆಲೆಯಾಗಿ ದುರ್ಭರ ನಗರ ಜೀವನದಲ್ಲಿ ಪ್ರಕೃತಿಯ ಸಮತೋಲನವನ್ನು ನಿಯಂತ್ರಿಸಿ ಲಕ್ಷಾಂತರ ಜೀವಿಗಳ ಬದುಕನ್ನು ಸಹ್ಯವಾಗಿಸುವಲ್ಲಿ ಹಸುರಿನ ಅಕ್ಷಯನಿಧಿಯಾಗಿದೆ. 

ಬೆಂಗಳೂರು ನಗರದ ಹೃದಯಭಾಗದಲ್ಲಿದ್ದು, ನಗರದ ಎಲ್ಲಾ ಮೂಲೆಗಳಿಂದಲೂ ಸುಲಭವಾಗಿ ತಲುಪಬಹುದಾದ ಲಾಲ್‌ ಬಾಗ್‌ ವರುಷಗಳುರುಳಿದಂತೆ ರಾಷ್ಟ್ರದ, ರಾಜ್ಯದ ಹಾಗೂ ನಗರದ ಪ್ರಕೃತಿಪ್ರಿಯ  ಮಹಾಜನತೆಗೆ ನಿರಂತರವಾಗಿ ಆಪ್ತತೆಯ ಆಪ್ಯಾಯತೆಯನ್ನು ಉದ್ದೀಪಿಸುತ್ತಿದೆ.

ವರ್ತುಲಾಕಾರದ ಮರದ ಕಲಾಕೃತಿಯಾಗಿರುವ ಬ್ಯಾಂಡ್‌ ಸ್ಟಾಂಡ್‌ ಉದ್ಯಾನದ ಹೃದಯಭಾಗದಲ್ಲಿ ಅತ್ಯಂತ ಆಕರ್ಷಣೀಯ ಪ್ರಕೃತಿ ನೆಲೆಯಲ್ಲಿದ್ದು, ಸುತ್ತಲೂ ಆಕರ್ಷಕ ಗೋಡೆಯನನು ನಿರ್ಮಿಸಲಾಗಿದೆ. ನಾಲ್ಕೂ ದಿಕ್ಕುಗಳಲ್ಲಿ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಪೂರ್ವದಿಂದ ಗಾಜಿನಮನೆ ಮತ್ತು ಪಶ್ಚಿಮದಿಂದ ಸಸ್ಯಕಲಾಕೃತಿ ಉದ್ಯಾನಗಳ ನಯನಮನೋಹರ ನೋಟವನ್ನು ಬ್ಯಾಂಡ್‌ ಸ್ಟಾಂಡ್‌ ಮೂಲಕ ಕಾಣಬಹುದಾಗಿದೆ. ಪ್ರಸ್ತುತ ಇಲ್ಲಿ ಬೆಳಗಿನ ಮತ್ತು ಸಂಜೆಯ ಸಮಯದಲ್ಲಿ ಸಂಗೀತದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ.

   
   
 

ಸಸ್ಯಶಾಸ್ತ್ರೀಯ ತೋಟದ ಪ್ರವೇಶದ್ವಾರದ ಸಮೀಪದಲ್ಲಿಯೇ ಭೂಮಿಯ ಮೇಲೆ ನಿರ್ಮಿಸಲಾಗಿರುವ ಬೃಹತ್‌ ಪುಷ್ಪ ಗಡಿಯಾರ ಉದ್ಯಾನದ ವಿಶೇಷಗಳಲ್ಲಿ ಒಂದಾಗಿದೆ. ಆಂಗ್ಲ ಜಾನಪದ ಕಥೆಯ ಪ್ರಸಿದ್ಧ ಪಾತ್ರಧಾರಿಗಳಾಗಿರುವ ಸ್ನೋವೈಟ್‌ ಮತ್ತು ಏಳು ಜನ ಕುಳ್ಳರ ವಿಗ್ರಹಗಳನ್ನು ಗಡಿಯಾರದ ಒಳಗಡೆ ನಿಲ್ಲಿಸಲಾಗಿರುವುದು ವಿಶೇಷವಾಗಿದೆ.

 

ಲಾಲ್‌ ಬಾಗಿನ ಪೂರ್ವದ್ವಾರದಿಂದ (ಕೆಂಗಲ್‌ ಹನುಮಂತಯ್ಯ ಜೋಡಿ ರಸ್ತೆ) ಬಂದರೆ ಬಲಗಡೆಗಿರುವ ಎರಡೂವರೆ ಎಕರೆ ಪ್ರದೇಶವೇ ಬೋನ್ಸಾಯ್‌ ಉದ್ಯಾನವಾಗಿದೆ. ವಿಶೇಷ ವಿನ್ಯಾಸದ ಚೀನೀ ಮಾದರಿಯ ಪಗೋಡ ಪ್ರವೇಶದ್ವಾರದ ಈ ವಿಶಿಷ್ಠ ಉದ್ಯಾನದಲ್ಲಿ ಒಂದು ವರ್ಷದಿಂದ 65 ವರ್ಷದವರೆಗಿನ ಸುಮಾರು 700 ಬೋನ್ಸಾಯ್‌ ಗಿಡಗಳಿವೆ.

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಸಂಪರ್ಕಿಸಿ:

 

ತೋಟಗಾರಿಕೆ ಜಂಟಿ ನಿರ್ದೇಶಕರು

(ಉದ್ಯಾನವನಗಳು, ತೋಟಗಳು ಮತ್ತು ಪುಷ್ಪಾಭಿವೃದ್ಧಿ)

ಲಾಲ್‌ ಬಾಗ್‌ ಸಸ್ಯತೋಟ, ಬೆಂಗಳೂರು- 560004, ಕರ್ನಾಟಕ, ಭಾರತ

ದೂರವಾಣಿ: +91- 80- 26564133

ಇ-ಮೇಲ್-‌ jdhpgf@gmail.com

 

ತೋಟಗಾರಿಕೆ ಉಪ ನಿರ್ದೇಶಕರು

ಲಾಲ್‌ ಬಾಗ್‌ ಸಸ್ಯತೋಟ, ಬೆಂಗಳೂರು- 560004, ಕರ್ನಾಟಕ, ಭಾರತ

ದೂರವಾಣಿ: +91- 80- 26578184

ಇ-ಮೇಲ್-‌ ddhlbg@gmail.com

   

 

ಇತ್ತೀಚಿನ ನವೀಕರಣ​ : 17-08-2021 11:42 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ತೋಟಗಾರಿಕೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080